ಶಿವಭಕ್ತಿರಿಗೆ ಭವಿ ಸರಿಯೆಂಬ
ಭ್ರಷ್ಟ ಭಂಡರು ನೀವು ಕೇಳಿರೊ.
ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ?
ಗರತಿಗೆ ತೊತ್ತು ಸರಿಯೆ? ಭಿತ್ತಿಗೆ ಕೇರು ಸರಿಯೆ?
ವಿರಕ್ತಿಗೆ ಪಿರಿತಿ ಸರಿಯೆ? ಕತ್ತಲೆಗೆ ಬೆಳಗು ಸರಿಯೆ?
ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ
ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ?
ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Art
Manuscript
Music
Courtesy:
Transliteration
Śivabhaktirige bhavi sariyemba
bhraṣṭa bhaṇḍaru nīvu kēḷiro.
Adēnu kāraṇavendare kattege kudure sariye?
Garatige tottu sariye? Bhittige kēru sariye?
Viraktige piriti sariye? Kattalege beḷagu sariye?
Kartage bhr̥tya sariyemba duruktiya durācāri
dūṣaka holeyarige bhakti muktiyelliyado?
Virakti vīraśaiva vicāra avanigelliyado? Illa,
akhaṇḍa paripūrṇa ghanaliṅgaguru
cennabasavēśvara śivasākṣiyāgi.