Index   ವಚನ - 3    Search  
 
ವಿಶ್ವವೆಲ್ಲ ಪಶುವು, ಶಿವನೊಬ್ಬನೆ ಪತಿ, ಬೇರೊಬ್ಬ ಪತಿಯಿಲ್ಲ. ಇದು ಸತ್ಯವಿದು ಸತ್ಯ. ನಮ್ಮ ಹುಲಿಗೆರೆಯ ವರದ ಸೋಮನಾಥನಲ್ಲದೆ ಬೇರೊಬ್ಬರುಂಟಾದರೆ ತೋರಿಕೊಡಿ ಭೋ, ನೀವು ಬಲ್ಲರೆ.