ಅಪ್ಪುವಿನ ಶಿಲೆಯ ಉಳಿಯ
ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ
ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರುಗೋಲನೇರಿ
ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ
ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಂಟೆಂದಡೆ:
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ
ಭಾವಜ್ಞನ ತೆರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ.
Art
Manuscript
Music
Courtesy:
Transliteration
Appuvina śileya uḷiya
moneyalli citrisabahudē?
Aragina ghaṭava uriya moneyalli
akṣarava bareyabahude?
Mr̥ttikeya harugōlanēri
nadiya tappalige hōgabahude?
Nijaniścayavanariyadavana
vācāracane iṣṭalladilla.
Nijatattvavanaridavana vācāracaneya kuruhentuṇṭendaḍe:
Śileyoḷagaṇa surabhiyante
praḷayadoḷagāda nijanivāsadante
āyada ghāyadante, sughāyada sukhadante
intī bhāvarahitavāda
bhāvajñana tera kūgiṅge horagu
mahāmahima mārēśvarā.