ತನ್ನಲೊಂದು ಗುಣ ತೋರಲಿಕ್ಕಾಗಿ
ಆ ಗುಣವ ಇದಿರು ಕಂಡು
ನುಡಿದರೆಂದು ನೋಯಲೇತಕ್ಕೆ?
ಆ ನುಡಿ ತನಗೆ ನಿರುತ್ತರವೆಂಬುದನರಿದು
ಘಾಯ ಬಾಹುಗಳಲ್ಲಿ ಶ್ರೋಣಿತ
ಹೊರೆಯಲ್ಲಿ ನಿಂದಿರಲಿಕ್ಕಾಗಿ
ಘಾಳಿಸಿ ಹೊರವಡಿಸಿದಾತ ಹಗೆತನನೆಂಬುದರಿತು
ತನ್ನಲುಂಟಾದವಗುಣ ತನಗೆ ತೋರದಿರೆ
ದೃಷ್ಟವ ಕಂಡು ಹೇಳಿದ ಮತ್ತೆ ಮಿಥ್ಯಗುಣವಿಲ್ಲದೆ
ಆ ಕಷ್ಟಗುಣವ ಬಿಡಬೇಕು.
ಈ ಗುಣ ಅಂಗವಿದ್ದಲ್ಲಿ ನಿಂದೆಯ
ದುರ್ಗುಣ ಸೋಂಕದಿಹವೆ?
ಅರಿಯದೆ ಸೋಂಕಿದಲ್ಲಿ ಅರಿದ ಮತ್ತೆ ತೊರೆಯಬೇಕು.
ತೋರಿದಡೆ ಕೂಗಿನ ದನಿಗೆ ಹೊರಗು
ಮಹಾಮಹಿಮ ಮಾರೇಶ್ವರಾ.