Index   ವಚನ - 2    Search  
 
ಇದೇನೊ, ಮೀರಿ ತೋರುವ ಮೂರುತಿ ಪುಷ್ಪಗುಂಪಿನಲ್ಲಿ ಕಾಣದೆ ಹೋಗಿದೆ ? ಇದೇನೊ, ಮೀರಿ ತೋರುವ ಮೂರುತಿ ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿ ತೋರುತ್ತದೆ ? ಇಂತಪ್ಪ ಮೂರ್ತಿಯ ಕಂಡು ಗಂಗಾಪ್ರಿಯ ಕೂಡಲಸಂಗನ ಶರಣನ ಸತಿಯಳು ಧನ್ಯಳಾದಳು ಚೆನ್ನಬಸವಣ್ಣಾ.