Index   ವಚನ - 15    Search  
 
ಇಂದುವಿನಲ್ಲಿ ಉದಯವಾದ ಕಲ್ಲಿನಂತೆ ಮುನಿಸ ಮರೆದಿರ್ದಳವ್ವೆ. ಅವನ ಸೋಂಕಿನಲ್ಲಿ ಸುಖಿಯಾದಳು. ಅಗಲಿದಡೆ ಕರಿಗೊಂಡಳು. ಮಹಾಲಿಂಗ ಗಜೇಶ್ವರದೇವರಲ್ಲಿ ಮನಸೋಂಕಿ ಮನ ಲೀಯವಾದಳವ್ವೆ.