Index   ವಚನ - 16    Search  
 
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ ಇರುಳಿನ ತಾವರೆಯಂತೆ ಮುಖ ಬಾಡಿ, ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ, ಇರುಳಿನ ಸಮುದ್ರದಂತೆ ಘನವಾಗಿ, ಸಲೆ ಉಮ್ಮಳಿಸಿ ಸಂಜೆವರಿದು ಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತ್ತು.