Index   ವಚನ - 18    Search  
 
ಉದರವ ತಾಗಿದ ಮಾತು ಅಧರ ತಾಗಿದಲ್ಲಿ ಬೀಸರವೋದೀತೆಂದು ಅಧರವ ಮುಚ್ಚಿಕೊಂಡಿರ್ದಳವ್ವೆ. ಕಂಗಳ ಕೊನೆ ಬೀಸರವೋದಿತೆಂದು ಕಂಗಳ ಮುಚ್ಚಿಕೊಂಡಿರ್ದಳವ್ವೆ. ಪರಿಮಳ ಬೀಸರವೋದೀತೆಂದು ಅಳಿಗೆ ಬುದ್ಧಿಯ ಹೇಳಿದಳವ್ವೆ. ಮನ ಬೀಸರವೋದೀತೆಂದು ದಿನಕರನ ಕಾವಲಕೊಟ್ಟಳವ್ವೆ, ಇಂದು ನಮ್ಮ ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ.