Index   ವಚನ - 36    Search  
 
ತಮ್ಮ ತಮ್ಮ ಗಂಡರು ಚೆಲುವರೆಂದು ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ! ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ! ಮಹಾಲಿಂಗ ಗಜೇಶ್ವರದೇವರು ನಿರಿಯ ಸೆರಗ ಸಡಿಲಿಸಲೊಡನೆ ಆನೇನೆಂದರಿಯೆನವ್ವಾ.