Index   ವಚನ - 42    Search  
 
ನೀನೊಲಿದು ಕೂರ್ತವರು ನಿಮಗೊಲಿದು ಕೂರ್ತವರು. ನಿಮ್ಮ ಪರಿಯೇ ಅವರು, ನಿಮ್ಮ ರೂಹೇ ಅವರು. ಅವರನೇನ ಹೇಳುವೆ. ಆಳಾರು ಅರಸಾರು ಎಂದರಿಯಬಾರದು. ನಿಮ್ಮ ರೂಹೆ ಅವರು. ಮಹಾಲಿಂಗ ಗಜೇಶ್ವರನೊಲಿದು ಪೂಜಿಸಿದವರು ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಪದವಿಗಳ ಪಡೆವರು. ಎನಗೆ ನಿಮ್ಮ ಶರಣರೇ ನೀವೆಂದು ಅರಿದಿರ್ಪುದೇ ಸಾಕು.