Index   ವಚನ - 66    Search  
 
ಹಗಲು ಹಸಿವಿಂಗೆ ಕುದಿದು ಇರುಳು ನಿದ್ರೆಗೆ ಕುದಿದು ಉಳಿದಾದ ಹೊತ್ತೆಲ್ಲಾ ಆಶನ ವ್ಯಸನಕ್ಕೆ ಕುದಿದು ಅಯ್ಯಾ, ನಿಮ್ಮನರಿಯದ ಪಾಪಿ ನಾನಯ್ಯಾ. ಅಯ್ಯಾ, ನಿಮ್ಮನರಿಯದ ಕರ್ಮಿ ನಾನಯ್ಯಾ. ಮಹಾಲಿಂಗ ಗಜೇಶ್ವರದೇವಾ, ಅಸಗ ನೀರಡಸಿದಂತಾಯಿತ್ತೆನ್ನ ಸಂಸಾರ.