Index   ವಚನ - 67    Search  
 
ಹಲವುಕಾಲದ ಅಗಲಿಕೆ ತಾರ್ಕಣೆಗೊಂಡಂತವ್ವಾ. ಮುನಿಸು ನಾಚಿಕೆ ಹೋಗಿ ಕಂಗಳ ಕೊನೆಯಲ್ಲಿ ಸಿಲುಕಿದೆನವ್ವಾ. ತನು ಜರ್ಝರಿತವಾಗಿ ಕಂಗಳ ಕೊನೆಯಲ್ಲಿ ಸಿಲುಕಿದ ಎನ್ನ ಮಹಾಲಿಂಗ ಗಜೇಶ್ವರನುಳಿದನೆಂದಡೆ ಆಲಿಕಲ್ಲ ನುಂಗಿದ ಚಕೋರನಂತಾದೆನವ್ವಾ.