Index   ವಚನ - 69    Search  
 
ಹೊನ್ನು ಕೊಡನ ಹೊಮ್ಮಿನ ಹಮ್ಮಿನ ಕಳಯ ಪುಳಕದಲ್ಲಿ ತಾರಕಿ ತಾರಕಿ ತಳಿತಂತೆ ಅಂಗಸಂಗದಲ್ಲಿದ್ದಳವ್ವೆ. ಬಂದ ಭರವಿನ ನಿಂದ ಚಂದದ ಹೊಸಹೂವ ಮುಡಿದಳವ್ವೆ. ಅಡವಿಯಲಾದ ಮರನಡಿಯಲಿದ್ದ ಬಿಸಿಲ ಬಯಸಿದಳವ್ವೆ. ಇಂದು ಮಹಾಲಿಂಗ ಗಜೇಶ್ವರನ ನೆರವ ಭರದಲ್ಲಿ, ಕಳಕೆ ಬಂದ ಮೃಗದಂತೆ ತನ್ನ ತಾ ಮರೆದಿರ್ದಳವ್ವೆ.