Index   ವಚನ - 4    Search  
 
ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವಪಂಚಾಕ್ಷರಿಯ ಅನ್ಯರಿಗೆ ಕೊಡಬಹುದೆ ? ಕೊಡಬಾರದು. ಆ ಗುರುವಿಂಗೆ ಕೊಡಬೇಕು. ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ, ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ ಮಸಣಯ್ಯಪ್ರಿಯ ಗಜೇಶ್ವರಾ ?