ನಾಲ್ಕು ವೇದಂಗಳು ಉಪಮೆ;
ಹದಿನಾರು ಶಾಸ್ತ್ರಂಗಳು ಉಪಮೆ;
ಹದಿನೆಂಟು ಪುರಾಣಂಗಳು ಉಪಮೆ;
ಇಪ್ಪತ್ತೆಂಟು ಆಗಮಂಗಳು ಉಪಮೆ;
ಮೂವತ್ತೆರಡು ಉಪನಿಷತ್ತುಗಳು ಉಪಮೆ;
ಅನೇಕ ಶಬ್ದ, ಅನೇಕ ಶಾಸ್ತ್ರ,
ಅನೇಕ ತರ್ಕವ್ಯಾಕರಣಗಳೆಲ್ಲ ಉಪಮೆ;
ಅನೇಕ ಮಂತ್ರತಂತ್ರ ಸಿದ್ದಿಗಳು ಉಪಮೆ;
ಚೌಷಷ್ಠಿ ವಿದ್ಯೆಂಗಳು ಉಪಮೆ;
ಕಾಣದುದ ಕಾಬುದು ಉಪಮೆ;
ಕೇಳದುದ ಕೇಳುವುದು ಉಪಮೆ;
ಅಸಾಧ್ಯವ ಸಾಧಿಸುವುದು ಉಪಮೆ;
ಸರಿಯಲ್ಲ, ಶರಣರು ಉಪಮಾತೀತರಯ್ಯ.
ನಿಮ್ಮ ಶರಣನು ಒಕ್ಕುದ ಕೊಂಡುದರಿಂದ
ನಾನು ನೀನು ಕೃತಾರ್ಥರಾದೆವು ಕಾಣಾ
ಮಸಣ್ಣಯ್ಯಪ್ರಿಯ ಗಜೇಶ್ವರಾ
Art
Manuscript
Music
Courtesy:
Transliteration
Nālku vēdaṅgaḷu upame;
hadināru śāstraṅgaḷu upame;
hadineṇṭu purāṇaṅgaḷu upame;
ippatteṇṭu āgamaṅgaḷu upame;
mūvatteraḍu upaniṣattugaḷu upame;
anēka śabda, anēka śāstra,
anēka tarkavyākaraṇagaḷella upame;
anēka mantratantra siddigaḷu upame;
cauṣaṣṭhi vidyeṅgaḷu upame;
kāṇaduda kābudu upame;
kēḷaduda kēḷuvudu upame;
asādhyava sādhisuvudu upame;
sariyalla, śaraṇaru upamātītarayya.
Nim'ma śaraṇanu okkuda koṇḍudarinda
nānu nīnu kr̥tārtharādevu kāṇā
masaṇṇayyapriya gajēśvarā