Index   ವಚನ - 19    Search  
 
ಭಕ್ತಗಣಂಗಳು ನಮಸ್ಕಾರವ ಮಾಡುವ ಕ್ರಮವು: ಗುರುವಿಗೆ ದೀರ್ಘದಂಡ ನಮಸ್ಕಾರವ ಮಾಡಿದಡೆ ಹಿಂದಣ ಜನ್ಮದ ಪಾತಕದ ಪರಿಹಾರವು. ಲಿಂಗಕ್ಕೆ ಕರಮುಟ್ಟಿ ನಮಸ್ಕಾರವ ಮಾಡಿದಡೆ ಉರಿಯುಂಡ ಕರ್ಪುರದ ಹಾಗೆ ಆಗುವುದು. ಜಂಗಮಕ್ಕೆ ತಲಮುಟ್ಟಿ ನಮಸ್ಕಾರವ ಮಾಡಿದಡೆ ನಿಜಮುಕ್ತಿಯಾಗುವುದು. ಭಕ್ತಂಗೆ ಸಾಷ್ಟಾಂಗ ನಮಸ್ಕಾರವು. ಅಭಯಂಗೆ ಸಾಷ್ಟಾಂಗ ನಮಸ್ಕಾರವು. ಏಕೆಂದಡೆ, ಆ ಭಕ್ತನ ಹೃದಯದಲ್ಲಿ ಅಷ್ಟಾವರಣಮೂರ್ತಿಗಳಿಹರು. ಅದಕ್ಕೆ ಭಕ್ತಂಗೆ ಅಷ್ಟಾಂಗಭೂಮಿಗೆ ಹೊಂದಿ ನಮಸ್ಕಾರವ ಮಾಡಿದಡೆ ಗಣಪದವಿಯಪ್ಪುದು. ಇದಕ್ಕೆ ತ್ರಿಕರಣಶುದ್ಧವಾಗಿ ವಂಚನೆಯಿಲ್ಲದೆ ತನು-ಮನ-ಧನವನೊಪ್ಪಿಸಿ ಈ ಚತುರ್ವಿಧಮೂರ್ತಿಗಳಿಗೆ ನಮಸ್ಕಾರವ ಮಾಡಿದಡೆ ನಾಲ್ಕು ಪದವಿ ಸಿದ್ಧವಪ್ಪುದು ತಪ್ಪದು ಶಾಶ್ವತ ಎಂದಾತ ನಮ್ಮ ಶಾಂತಕೂಡಲಸಂಗಮದೇವ