Index   ವಚನ - 22    Search  
 
ವಸ್ತುವೆಂದಡೆ ಪರಬ್ರಹ್ಮದ ನಾಮವು. ಅದು ಹೇಗೆಂದಡೆ : ಹರಿ ಸುರ ಬ್ರಹ್ಮಾದಿಗಳಿಗೆ ಅಗೋಚರವಾಗಿಪ್ಪುದು. ಸಾಧ್ಯಕ್ಕಸಾಧ್ಯವಾಗಿಪ್ಪುದು. ಭೇದ್ಯಕ್ಕಭೇದ್ಯವಾಗಿಪ್ಪುದು. ಕೋಟಿ ಸೂರ್ಯ ಕೋಟಿ ಸೋಮಪ್ರಕಾಶಕ್ಕೆ ಮಿಗಿಲಾಗಿಪ್ಪುದು. ಈರೇಳು ಭುವನವ ತುಂಬಿಕೊಂಡಿಪ್ಪುದು. ಅಪ್ರಮಾಣ ಅಗೋಚರವಾದ ವಸ್ತು ಎನ್ನ ಕರ ಮನ ಭಾವದೊಳಗಿಪ್ಪ ಭೇದವ ತಿಳುಹಿದಾತ ನಮ್ಮ ಶಾಂತಕೂಡಲಸಂಗಮದೇವ.