Index   ವಚನ - 34    Search  
 
ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮಂಗಳು ಇವು ಯಾಕೆ ನಿರ್ಮಾಣ ಮಾಡಿದಿರಿ ಸ್ವಾಮಿ? ದಯದಿಂದ ಕರುಣಿಪುದು. ಕೇಳಯ್ಯ ಮಗನೆ: ಹರಿ ಸುರ ಬ್ರಹ್ಮಾದಿಗಳು ದೇವ ದಾನವ ಮಾನವರುಗಳು ಎಂಬತ್ತೆಂಟು ಕೋಟಿ ಮುನಿಗಳು ಇವರೆಲ್ಲರು ಮನವ ನಿಲಿಸಿಹೆವೆಂದು ಬಿನ್ನಹ ಮಾಡಿಕೊಳ್ಳಲು ಶಿವನು ಸರ್ವ ಶ್ರುತಿ ಸ್ಮೃತಿ ಶಾಸ್ತ್ರವ ನಿರ್ಮಾಣ ಮಾಡಿದನು. 'ವೇದಾಂತತತ್ತ್ವಮಧಿಕಂ ನವನೀತಸಾರಂ' ಎಂಬುದಾಗಿ, ವೇದ ಮೊದಲಾದುವೆಲ್ಲವು ಮಜ್ಜಿಗೆ ಹಾಗೆ, ಪುರಾತನರ ವಚನಗಳು ಗುರುವಾಕ್ಯವೆಲ್ಲವು ಬೆಣ್ಣೆ ಹಾಗೆ. ಈ ಗುರುವಾಕ್ಯವಿಡಿದು ಲಿಂಗದಲ್ಲಿ ಮನವ ನಿಲಿಸಿದಡೆ ಸರ್ವ ಶಾಸ್ತ್ರವೇಕೆ? ಮನವು ಲಿಂಗದಲ್ಲಿ ನಿಲ್ಲದಿರ್ದಡೆ, ಏನು ಮಾಡಿದಡೂ ನಿಷ್ಫಲ. ಇದನು ಮಹಾಜ್ಞಾನಿಗಳು ತಿಳಿದು ಗುರುವಿನ ಕರುಣೆಯ ಕೃಪೆಯಿಂದ ಲಿಂಗದಲ್ಲಿ ಬೆರೆದು ಲಿಂಗವೇ ತಾನು ತಾನಾಗಿ, ಜ್ಯೋತಿಗೆ ಜ್ಯೋತಿ ಕೂಡಿದಂತೆ ನಿಜಲಿಂಗೈಕ್ಯರಾದರು ಎಂದಾತ ನಮ್ಮ ಶಾಂತಕೂಡಲಸಂಗಮದೇವ