Index   ವಚನ - 38    Search  
 
ಇಷ್ಟಲಿಂಗಕ್ಕೆ ಅರ್ಪಿಸುವಾಗ, ಇಷ್ಟಲಿಂಗದಲ್ಲಿ ಮೂಲಮಂತ್ರವ ಧ್ಯಾನಿಸುವ ಕ್ರಮವು: ಓಂ ಹ್ರಾಂ ನಾಂ ಸದ್ಯೋಜಾತ ಆಚಾರಲಿಂಗಾಯನಮಃ ಇಷ್ಟಲಿಂಗದ ಶಕ್ತಿ ಪೀಠದ ಹಿಂದೆಸೆಯಲ್ಲಿ ಸಂಬಂಧ. ಓಂ ಹ್ರೀಂ ಮಾಂ ವಾಮದೇವ ಗುರುಲಿಂಗಾಯನಮಃ ಇಷ್ಟಲಿಂಗದ ಎಡದ ಕೈಯಲ್ಲಿ ಸಂಬಂಧ. ಓಂ ಹ್ರೂಂ ಸಿಂ ಅಘೋರ ಶಿವಲಿಂಗಾಯನಮಃ ಇಷ್ಟಲಿಂಗದ ಬಲಭಾಗದ ವರ್ತುಳದ ಸಂಧಿಲಿ ಸಂಬಂಧ. ಓಂ ಹ್ರೈಂ ವಾಂ ತತ್ಪುರುಷ ಜಂಗಮಲಿಂಗಾಯನಮಃ ಇಷ್ಟಲಿಂಗದ ಎಡದ ಭಾಗದ ಗೋಮುಖದಲ್ಲಿ ಸಂಬಂಧ. ಓಂ ಹ್ರೌಂ ಯಾಂ ಈಶಾನ್ಯ ಪ್ರಸಾದಲಿಂಗಾಯನಮಃ ಇಷ್ಟಲಿಂಗದ ನಾಳದಲ್ಲಿ ಸಂಬಂಧ. ಓಂ ಹ್ರಃ ಓಂ ಗೋಪ್ಯಮುಖ ಮಹಾಲಿಂಗಾಯನಮಃ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧ. ಓಂ ಬಾಂ ಅಂ ಇಷ್ಟಲಿಂಗಾಯನಮಃ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧ. ಓಂ ಸಾಂ ಉಂ ಪ್ರಾಣಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ವರ್ತುಳದಲ್ಲಿ ಸಂಬಂಧ. ಓಂ ವಾಂ ಮಾಂ ಭಾವಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ಗೋಮುಖದ ತುದಿಯಲ್ಲಿ ಸಂಬಂಧ ಶಾಂತಕೂಡಲಸಂಗಮದೇವಾ