Index   ವಚನ - 40    Search  
 
ಇನ್ನು ಇಷ್ಟಲಿಂಗದ ಸಿಂಹಾಸನ ಗದ್ದಿಗಿ ಉದ್ದರಣೆ: ಕರಕಮಲದೊಳಗೆ ಷಟ್ಕೋಣೆಯಂ ಬರದು ಇಪ್ಪತ್ತು ಮೂರು ಪ್ರಣಮಮಂ ವಿಭೂತಿಯಲ್ಲಿ ಬರದು ಲಿಂಗವ ಮೂರ್ತವ ಮಾಡಿಸಿ, ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿದವರಿಗೆ ರಾಜಭಯ, ಚೋರಭಯ, ಮೃತ್ಯುಭಯ, ಸಿಡಿಲುಭಯ, ಗ್ರಹ ಭಯ, ಕುಟಿಲ ಭಯ, ವ್ಯಾಧಿ ಭಯ, ಉರಗ ಭಯ, ವೃಶ್ಚಿಕ ಭಯ, ಮೃಗಭಯ, ನೂರೆಂಟು ವ್ಯಾಧಿ ಭಯ, ಸರ್ವವ್ಯಾಧಿ ಮೊದಲಾದ ಎಲ್ಲವನು ಪರಿಹರವಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ