Index   ವಚನ - 1    Search  
 
ಮಂಡೆಯ ಬೋಳಿಸಿಕೊಂಡು, ತೀರ್ಥಕ್ಷೇತ್ರ ಇಕ್ಕಿಯೆರವವರ ಕಾರುಣ್ಯವಾಗಿ ಕಡು ಶಾಸ್ತ್ರಿಗನಾಗದೆ, ಹಾರುವನಂತೆ ಲಂಡಕೊಂಡೆಯರ ಕಂಡು, ಹೊಯಿಹೊಡದಂತಿಪ್ಪ ಶಿವಶರಣರು ಒರಗಿದಡೆ ಒಲ್ಲರು, ಕಂಡಡರಿಯರು, ಮಡಿಕೆಯಾಗಿ ಹೊದೆಯರು, ಉಡಿಗೆಯನುಡರು, ತೊಡಿಗೆಯ ತೊಡರು, ಇಡಿಗೆಯನಿಡರು. ಕಪ್ಪಕಂಬಳಿಯ ಹೊದ್ದು, ಕುಪ್ಪಸ ನಿಃಪತಿಯಾದ ಶರಣ, ಗಾರ್ಗೇಶ್ವರಲಿಂಗವು ತಾನೇ ಪರಮ ವಿರತನಾದಿರವು.