Index   ವಚನ - 1    Search  
 
ಅಂಗದ ಹೊಲಬನರಿದಲ್ಲದೆ ಲಿಂಗದ ನೆಲೆಯನರಿಯಬಾರದು. ಲಿಂಗದ ನೆಲೆಯನರಿದಲ್ಲದೆ ನಿಜನಿರ್ಣಯವ ತಿಳಿಯಬಾರದು. ನಿಜನಿರ್ಣಯವ ತಿಳಿದಲ್ಲದೆ ತನ್ನ ತಾನರಿಯಬಾರದು. ಗುರುಕರುಣದಿಂದ ತನ್ನ ತಾನರಿದ ಶರಣಂಗೆ ಅಂಗಕ್ಕೆ ಆಚಾರವಿಲ್ಲ, ಲಿಂಗಕ್ಕೆ ಕುರುಹಿಲ್ಲ. ಗುರುಬಸವೇಶನೆಂಬುದಕ್ಕೆ ಕುರುಹು ಮುನ್ನಿಲ್ಲ.