Index   ವಚನ - 1    Search  
 
ಏಕಾಕ್ಷರ ದ್ವ್ಯಕ್ಷರ ತ್ರ್ಯಕ್ಷರ ಪಂಚಾಕ್ಷರ. ಅಕಾರವೇ ಬೀಜ, ಆಕಾರವೇ ಮೂರ್ತಿ. ಕಕಾ ಕಿಕೀ ಕುಕೂ ಧಾಂ ಧೀಂ ಧೋಂ ಧೌಂ ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ. ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು, ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ?