Index   ವಚನ - 1    Search  
 
ಸಿರಿಯೆಂದಡೆಲ್ಲರೂ ಬರ್ಪರೈಸೆ ಉರಿಯೆಂದಡಾರೂ ನಿಲಲಾರರಯ್ಯಾ. ಉರಿವುತಿದೆ ಲೋಕ ಗರಳದುರಿಯಿಂದ. ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ. ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು ಮರುಳುಗೊಂಡರು, ನಿಮ್ಮ ನಿಜವನರಿಯದೆ. ಸಿರಿಯ ಭಕ್ತರಿಗಿತ್ತು, ಉರಿಯ ನೀ ಧರಿಸಿದೆ. ಸರಿಯಾರು ನಿನಗೆ ಗುರುವರದ ವಿರೂಪಾಕ್ಷಾ!