Index   ವಚನ - 1    Search  
 
ಹರಹರ, ಶಿವಶಿವ, ಜಯಜಯ ಶ್ರೀಗುರುಲಿಂಗಜಂಗಮ ಶರಣಗಣಂಗಳಲ್ಲಿ ಕಿಂಕರ ಭೃತ್ಯಭಾವಸದ್ಭಕ್ತಿಯೆ ನಿಜಶಿವಯೋಗವಯ್ಯ. ಸದ್ಭಕ್ತಿಯೆ ನಿಜಕೈವಲ್ಯಪದವಯ್ಯ. ಸದ್ಭಕ್ತಿಯೆ ಪರಮಕೈಲಾಸವಯ್ಯ. ಸದ್ಭಕ್ತಿಯೆ ನಿಜಮೋಕ್ಷಮಂದಿರವಯ್ಯ. ಸದ್ಭಕ್ತಿಯೆ ರುದ್ರಲೋಕವಯ್ಯ. ಸದ್ಭಕ್ತಿಯೆ ಶಿವಲೋಕ ಶಾಂಭವಲೋಕವಯ್ಯ. ಸದ್ಭಕ್ತಿಯೆ ನಾಗಲೋಕ ದೇವಲೋಕವಯ್ಯ. ಸದ್ಭಕ್ತಿಯೆ ಕಾಮಧೇನು - ಕಲ್ಪವೃಕ್ಷ - ಚಿಂತಾಮಣಿಯಯ್ಯ. ಸದ್ಭಕ್ತಿಯೆ ಸಂಜೀವನ ಪರಮಾಮೃತವಯ್ಯ. ಸದ್ಭಕ್ತಿಯೆ ನಿತ್ಯತ್ವ ಪರಮಪದವಯ್ಯ. ಸದ್ಭಕ್ತಿಯೆ ಚಿದೈಶ್ವರ್ಯ ಚಿದಾಭರಣವಯ್ಯ. ಸದ್ಭಕ್ತಿಯೆ ಮಹಾತೀರ್ಥವಯ್ಯ. ಸದ್ಭಕ್ತಿಯೆ ಮಹಾಶಿವಕ್ಷೇತ್ರವಯ್ಯ. ಸದ್ಭಕ್ತಿಯಿಂದ ಮಹಾಪಾಪಂಗಳು ಕುಸಿದು ಹೋಹವಯ್ಯ. ಸದ್ಭಕ್ತಿಯಿಂದ ಸಕಲಲೋಕಪಾವನವಯ್ಯ. ಸದ್ಭಕ್ತಿಯಿಂದ ಸದ್ಯೋನ್ಮುಕ್ತಿಯಯ್ಯ. ಸದ್ಭಕ್ತಿಯಿಂದ ಅನಂತರು ಮುಕ್ತರಾದರಯ್ಯ. ಸದ್ಭಕ್ತಿಯೆ ಮಹಾಜ್ಞಾನದರ್ಪಣ ನೋಡ ಸಂಗನಬಸವೇಶ್ವರ