Index   ವಚನ - 1    Search  
 
ಆರು ಸ್ಥಲದಲ್ಲಿ ಅರತೆನೆಂದು ಸಹಭೋಜನದಲ್ಲಿ ಉಂಬುವ ಅಣ್ಣಗಳು ನೀವು ಕೇಳಿರೋ. ಅಂಗದ ಮೇಲೆ ಲಿಂಗವಿರ್ದಡೇನಯ್ಯಾ, ಲಿಂಗವ ಪ್ರಾಣಕ್ಕೆ ಅವಧರಿಸದನ್ನಕ್ಕ? ಲಿಂಗದ ಅಷ್ಟವಿಧಾರ್ಚನೆಯ ಬಲ್ಲ[ರೇ]ನಯ್ಯಾ, ಅಷ್ಟ [ಮದಂಗಳ] ನಷ್ಟವ ಮಾಡಿ, ಪಂಚೇಂದ್ರಿಯಂ[ಗಳ ಬಂಧಿಸಿ], ಲಿಂಗದ ಮುಖ ನೋಡದನ್ನಕ್ಕ? ಇಂತಪ್ಪ ವರ್ಮಾದಿವರ್ಮಂಗಳ ಭೇದವನರಿಯದೆ, ಕರಸ್ಥಲದಿ ಲಿಂಗವ ಪಿಡಿದು ಸಹಭೋಜನವೆಂದು ಒಂದಾಗಿ ಉಂಬುವ ಆ ಲಿಂಗದ್ರೋಹಿಗಳ ನೋಡಿ, ನಗುತಿರ್ದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.