ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ
ಅದಾವ ರೂಪವಾಗಿ ಇದ್ದನಯ್ಯಾ ಬಸವಣ್ಣ!
ಬಲ್ಲರೆ, ಹೇಳಿ, ಅರಿಯದಿದ್ದರೆ ನೀವು ಕೇಳಿ.
ಅದು ಎಂತೆಂದಡೆ:
ಆದಿಯುಗದಲ್ಲಿ ಶರಣನೆಂಬ ಬಸವಣ್ಣ;
ಜಂಗಮನೆಂಬ ನಿರಂಜನ.
ಅನಾದಿಯೆಂಬ ಯುಗದಲ್ಲಿ ಬಸವಣ್ಣನೆ ಭಕ್ತ;
ಜಂಗಮವೆ ಸದಾಶಿವಲಿಂಗ.
ಅವ್ಯಕ್ತನೆಂಬ ಯುಗದಲ್ಲಿ ಬಸವನೆ ಅಲ್ಲಮ;
ಜಂಗಮವೆ ಪೀಠಾಧಾರವೆಂಬ ಲಿಂಗ.
ವ್ಯಕ್ತನೆಂಬ ಯುಗದಲ್ಲಿ ಬಸವನೆ ಬೊಮ್ಮಣ್ಣ;
ಜಂಗಮವೆ ಭೂತೇಶ್ವರಲಿಂಗ.
ಮಣಿರಣನೆಂಬ ಯುಗದಲ್ಲಿ ಬಸವನೆ ಆರೋಗ್ಯಕ್ಕೆ ವೈದ್ಯನಾದ.
ಜಂಗಮವೆ ಪ್ರಂಚವಕ್ತ್ರನೆಂಬ ಲಿಂಗ.
ವಿಶ್ವಾರಣನೆಂಬ ಯುಗದಲ್ಲಿ ಬಸವನೆ ಪೀತಶಂಭು;
ಜಂಗಮವೆ ಏಕಭರಿತನೆಂಬ ಲಿಂಗ.
ಅಲಂಕೃತನೆಂಬ ಯುಗದಲ್ಲಿ ಬಸವನೆ ಪ್ರಭುದೇವರು;
ಜಂಗಮವೆ ಸರ್ವೇಶ್ವರಲಿಂಗ.
ಕೃತಯುಗದಲ್ಲಿ ಬಸವನೆ ಗಜ್ಜಯ್ಯನಾದ;
ಜಂಗಮವೆ ತ್ರಿಪುರಾಂತಕಲಿಂಗ.
ತ್ರೇತಾಯುಗದಲ್ಲಿ ಬಸವನೆ ಬ್ರಾಹ್ಮಣನಾದ;
ಜಂಗಮನೆ ಲೋಕೇಶ್ವರನೆಂಬ ಲಿಂಗ.
ದ್ವಾರಪರಯುಗದಲ್ಲಿ ಬಸವನೆ ಶ್ರೀಧರಪಂಡಿತನಾದ;
ಜಂಗಮವೆ ಶ್ರೀಶೈಲ ಮಲ್ಲಿಕಾರ್ಜುನನಾದ.
ಕಲಿಯುಗದಲ್ಲಿ ಕರುಣಿ ಬಸವನೆಂಬ ವೃಷಭ,
ಜಂಗಮವೆ ಗೊಹೇಶ್ವರ.
ಪ್ರಾಳಿಯೆಂಬ ಯುಗದಲ್ಲಿ ಬಸವನೆ ಭೃಂಗೀಶ್ವರ;
ಜಂಗಮವೆ ಸದಾಶಿವ.
ಅರ್ಭೂತನೆಂಬ ಯುಗದಲ್ಲಿ ಬಸವನೆ ರಾಮಚಂದ್ರ:
ಜಂಗಮವೆ ಅನಾದಿಲಿಂಗ.
ತಮಂಧನೆಂಬ ಯುಗದಲ್ಲಿ ಬಸವನೆ ಕಾಲರುದ್ರ;
ಜಂಗಮವೆ ಊರ್ಧ್ವಪೀಠೇಶ್ವರ.
ತಂಡಜನೆಂಬ ಯುಗದಲ್ಲಿ ಬಸವನೆ ಶಂಕರ;
ಜಂಗಮವೆ ಸರ್ವೇಶ್ವರಲಿಂಗ.
ಭಿನ್ನಜನೆಂಬ ಯುಗದಲ್ಲಿ ಬಸವನೆ ಪಶುಪತಿ;
ಜಂಗಮವೆ ಮೂಕೇಶ್ವರಲಿಂಗ.
ಇಂತೀ ಬಸವನೆಂಬ ರೂಪೇ ಭಕ್ತ.
ಭಕ್ತನ ಮನದ ಕೊನೆಯ ಮೇಲೆ ಸೋಂಕಿ ಸುಳಿವಾತನೆ ಜಂಗಮ.
ಇಂತೀ ಉಭಯವ ಏಕವಂ ಮಾಡುವ
ನಂದಿನಿಯನಿದಿರಿಟ್ಟು ಪೂಜೆಯ ಮಾಡುವ
ದ್ರೋಹಿಗಳಿಗೆ ನಾನೇನೆಂಬೆನಯ್ಯಾ
ಗೊಹೇಶ್ವರಪ್ರಿಯ ನಿರಾಳಲಿಂಗಾ.
Art
Manuscript
Music
Courtesy:
Transliteration
Kaliyuga modalāda ippattondu yugadalli
adāva rūpavāgi iddanayyā basavaṇṇa!
Ballare, hēḷi, ariyadiddare nīvu kēḷi.
Adu entendaḍe:
Ādiyugadalli śaraṇanemba basavaṇṇa;
jaṅgamanemba niran̄jana.
Anādiyemba yugadalli basavaṇṇane bhakta;
jaṅgamave sadāśivaliṅga.
Avyaktanemba yugadalli basavane allama;
jaṅgamave pīṭhādhāravemba liṅga.
Vyaktanemba yugadalli basavane bom'maṇṇa;
jaṅgamave bhūtēśvaraliṅga.
Maṇiraṇanemba yugadalli basavane ārōgyakke vaidyanāda.
Jaṅgamave pran̄cavaktranemba liṅga.
Viśvāraṇanemba yugadalli basavane pītaśambhu;
jaṅgamave ēkabharitanemba liṅga.
Alaṅkr̥tanemba yugadalli basavane prabhudēvaru;
jaṅgamave sarvēśvaraliṅga.
Kr̥tayugadalli basavane gajjayyanāda;
jaṅgamave tripurāntakaliṅga.