Index   ವಚನ - 5    Search  
 
ಭಿಕ್ಷೆ ನಿರತರು ಭಿಕ್ಷಕ್ಕೆ ಹೋಗಿ ಅಕ್ಷ[ಯ] ಪಾತ್ರೆ ಗಿಡತರು. ಭಿಕ್ಷ ಏಳು ವಿಧವಾಗಿಪ್ಪುದು; ಭಿಕ್ಷ ಒಂಬತ್ತು ವಿಧವಾಗಿಪ್ಪುದು. [ನಿಚ್ಚ] ಭಿಕ್ಷ ಪಂಚಾಪ್ತರಲ್ಲಿ ಪಂಚ ಭಿಕ್ಷವನುಂಡು, ಕರಪಾತ್ರ ನಿರು ತನಾದಾತನಿಗೆ ದಿನವೊಂದಕ್ಕೆ ಭಿಕ್ಷ ಲಿಂಗಾರ್ಪಿತಕ್ಕೆ, ಭುವನದ ಎಲ್ಲರಿಗೆಯೂ ಒಡೆಯ! ನಿಚ್ಚ ಹಿಡಿತಡೆಯಿಲ್ಲ. ರಕ್ಷಾರಕ್ಷಕನ ಇಚ್ಛೆಯನರಿದು, ಭಿಕ್ಷಕ್ಕೆ ಹೋಗಿ, ಗೋಣಿಯ ಮರೆಯ ಕೋಟೆಯ ಹುರಿಮಾಡಿ......... ಕೇಟೇಶ್ವರಲಿಂಗದಲ್ಲಿ ಗೋಣಿ ಹರಿಯಿತ್ತು.