Index   ವಚನ - 11    Search  
 
ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ ತುಪ್ಪದ ಮಧುರದ ಸಾರವ ಕೂಡಿ ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ? ಇದು ನಿಶ್ಚಯ ವಸ್ತು ಸ್ವರೂಪು. ಮರ್ತ್ಯದ ದೃಕ್ಕು ದೃಶ್ಯಕ್ಕೆ ನಿಶ್ಚಯವಾಗಿಹನು. ಏಕಲಿಂಗ ನಿಷ್ಠೆವಂತರಲ್ಲಿ ಕಟ್ಟಳೆಯಾಗಿಹನು. ಆತ್ಮಲಕ್ಷ ನಿರ್ಲಕ್ಷ ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥ ಲಿಂಗವು.