Index   ವಚನ - 2    Search  
 
ಒಂದೊಂದೂ ಇಲ್ಲದಂದು, ನಂದಿವಾಹನರಿಲ್ಲದಂದು, ಹಿಂದೆ ಹದಿನಾಲ್ಕು ಭುವನಗಳಿಲ್ಲದಂದು ಅಂದಾರೂ ಲಿಂಗವ ಕಂಡವರೊಳರೆ? ಅಂದಾರೂ ಲಿಂಗವ ಕಂಡು ಹೇಳಿದವರೊಳರೆ? ನಿರಂಧ ತಮಂಧವಿಲ್ಲದಂದು ಕೂಡಲಚೆನ್ನಸಂಗನಲ್ಲಿ ಬಸವಣ್ಣನೊಬ್ಬನೆ ಉದಯವಾಗಿರ್ದನು.