Index   ವಚನ - 3    Search  
 
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ. ಆತನ ವಿದ್ಯಾ-ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ, ಆತನ ಶಾಂತಿ-ಸೈರಣೆಯಿಂದ ಹುಟ್ಟಿದಾತ ವಿಷ್ಣು, ಆತನ ಕೋಪ-ಕ್ರೋಧದಿಂದ ಹುಟ್ಟಿದಾತ ರುದ್ರ, ಈ ಮೂವರ ಪೀಠವಂತಿರಲಿ, ಈ ತತ್ತ್ವತ್ರಯಂಗಳಿಗೆ ತಾನೆ ಕಾರಣವಾಗಿಪ್ಪ ಆ ಶರಣನನ ನಿಲವನರಿದು ಶರಣೆನುತ್ತಿದ್ದೆನು, ಕೂಡಲಚೆನ್ನಸಂಗಮದೇವಾ.