Index   ವಚನ - 4    Search  
 
ಕಾಳಂಧರ ಧರೆ ಅಂಬರ ವಾರಿಧಿಸಹಿತ ಆರೂ ಇಲ್ಲದಂದು, ಪ್ರಮಥನೊಬ್ಬನಿದ್ದನೊಂದನಂತ ಕಾಲ. ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯನುಕೋಟಿ ವರುಷ. ಅಲ್ಲಿ ಅನಾಗತವುಂಟು. ಮನವು ಮಹವನೊಕ್ಕಾಡಿ ತತ್ತಲೆಯಾಗಿ ಮತ್ತಂತಲ್ಲಿಯೆ ನಿರಾಳವ ಬೆರ[ಸೆ] ಬಯಲು ಬೆಸಲಾಯಿತ್ತು. ಪ್ರಕೃತಿ ಪುರುಷರು ನರರು ಸುರರು ಮೊದಲಾದ ಚೌರಾಸಿಲಕ್ಷ ಜೀವರಾಸಿಗಳುದಯಿಸಿದವಯ್ಯಾ, ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣ ನೆನೆದಡೆ.