Index   ವಚನ - 8    Search  
 
ಲಿಂಗದ ಪೂರ್ವಾಶ್ರಯವ ಕಳೆದು, ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು ! ಲಾಂಛನದ ಪೂರ್ವಾಶ್ರಯವ ಕಳೆದು, ಇದು ಜಂಗಮಲಿಂಗವೆಂದು ತೋರಬಂದನಯ್ಯಾ ಬಸವಣ್ಣನು ! ಪ್ರಸಾದದ ಪೂರ್ವಾಶ್ರಯವ ಕಳೆದು, ಇದು, ಪ್ರಸಾದವೆಂದು ಸಯವ ಮಾಡಿ ತೋರಬಂದನಯ್ಯಾ ಬಸವಣ್ಣನು ! ಇಂತು ಲಿಂಗ ಜಂಗಮ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಮರ್ತ್ಯಕ್ಕೆ ಜನಿಸಿದನಯ್ಯಾ ಕೂಡಲಚೆನ್ನಸಂಗನಲ್ಲಿ ನಮ್ಮ ಬಸವಣ್ಣನು.