Index   ವಚನ - 23    Search  
 
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ, ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ- ಇಂಥ ಭವಿಯ ಕಳೆದು ಭಕ್ತನ ಮಾಡಿದ ಪರಿಯೆಂತೆಂದರೆ: ಆಕಾರವಿಲ್ಲದಂದಿನ, ನಿರಾಕಾರವಿಲ್ಲದಂದಿನ, ಕಾಮನ ಸುಟ್ಟ ವಿಭೂತಿಯೂ ಇಲ್ಲದಂದಿನ, ತ್ರಿಪುರವ ಸುಟ್ಟ ವಿಭೂತಿಯೂ ಇಲ್ಲದಂದಿನ, ತ್ರಿಪುರವ ಸುಟ್ಟ ವಿಭೂತಿಯೂ ಇಲ್ಲದಂದಿನ, ಆದಿಯಾಧಾರ ವಿಲ್ಲದಂದಿನ [ಚಿದ್] ವಿಭೂತಿಯ ತಂದು ಪಟ್ಟವ ಕಟ್ಟಿದರೆ, ಭಾವಕ್ಕೆ ಗುರುವಾಯಿತ್ತು, ಪ್ರಾಣಕ್ಕೆ ಲಿಂಗವಾಯಿತ್ತು ಜಿಹ್ವೆಗೆ ಪ್ರಸಾದವಾಯಿತ್ತು, ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು, ನಾಸಿಕಕ್ಕೆ ಸ್ವಾನುಭಾವ ಸುಗಂಧವಾಯಿತ್ತು ನೋಟಕ್ಕೆ ಜಂಗಮವಾಯಿತ್ತು, ಶಬ್ದಕ್ಕೆ ಸಂಭಾಷಣೆಯಾಯಿತ್ತು- ಇಂತೀ ಪೂರ್ವಗುಣಂಗಳೆಲ್ಲವ ಕಳೆದು ಸ್ವಸ್ಥಾನ ಶುದ್ಧವಾಯಿತ್ತಾಗಿ ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನೆಂಬ ಶ್ರೀಗುರುವಿಂದ ಸರ್ವಾಂಗಲಿಂಗಿಯಾದೆನು.