Index   ವಚನ - 25    Search  
 
ಚರಣವಿಡಿದಂಗೆ ಕರುಣಿ ಕಂದೆರವೆಯ ಮಾಡಬೇಕೆಂದು, ಮರಹಿಂದ ಬಂದ ಕಾಯದ ಕರ್ಮವ ಕಳೆದು ಗುರುಲಿಂಗವು ಕರುಣಿಸಿ ಕಂದೆರವೆಯ ಮಾಡಿದ ಪ್ರಾಣಲಿಂಗ ಸಂಬಂಧವೆಂತಿದ್ದುದೆಂದರೆ: ಆಲಿ ನುಂಗಿದ ನೋಟದಂತೆ, ಬಯಲು ನುಂಗಿದ ಬ್ರಹ್ಮಾಂಡದಂತೆ, ಮುತ್ತು ನುಂಗಿದ ಉದಕದಂತೆ, ಪುಷ್ಪ ನುಂಗಿದ ಪರಿಮಳದಂತೆ ಇಪ್ಪ ಮಹಾನುಭಾವದ ನುಡಿಗೆ ಎನ್ನೊಡಲಗುರಿ ಮಾಡಿದೆನಾಗಿ, ಎನ್ನ ಒಡಲ ಪರ್ಯಾಯ ಕೆಟ್ಟಿತ್ತಯ್ಯಾ, ಕೂಡಲಚೆನ್ನಸಂಗಮದೇವಾ.