Index   ವಚನ - 27    Search  
 
ಒಮ್ಮೆಯೂ ಶ್ರೀಗುರುವಿನ ಶ್ರೀ ಚರಣವ ನೆನೆಯಲೊಡನೆ ಭವಬಂಧನ ಬಿಡುವುದು. ಶ್ರೀ ಗುರುವೇ ಶರಣು ಗುರುಲಿಂಗವೇ ಶರಣು ಹರಿಬ್ರಹ್ಮಾದಿಗಳಿಗಗೋಚರವಾದ ಕೂಡಲಚೆನ್ನಸಂಗಯ್ಯನೆಂಬ ಲಿಂಗವ ತೋರಿದ ಬಸವಣ್ಣ ಗುರುವೇ ಶರಣು.