Index   ವಚನ - 37    Search  
 
ಆರಿವರತು ಮರುಹು ದಿಟ (ನಷ್ಟ?)ವಾದವರನೇನೆಂಬೆ? ಅರಿವನರಿಯದೆ ಮರೆವ ನೆರೆ ಸಂಸಾರಿಗಳನೇನೆಂಬೆ? ಕ್ರಿಯಾಕರ್ಮ ಸೂತಕರಲ್ಲದೆ ಉಭಯಕರ್ಮರಹಿತರನೇನೆಂಬೆ? ಅಂಗವಿಕಾರದ ಹಂಗಿನೊಳಗಿದ್ದು 'ಕೂಡಲಚೆನ್ನಸಂಗಾ' ಎಂಬವರನೇನೆಂಬೆ?