Index   ವಚನ - 39    Search  
 
ಕಬ್ಬುನದ ಸೊಣಗನ ತಂದು ಪರುಷವ ಮುಟ್ಟಿಸಲು. ಸುವರ್ಣದ ಸೊಣಗನಪ್ಪುದು, ಪರುಷವಾಗದು ನೋಡಾ. ಲೋಕದ ಮಾನವನ ತಂದು ಭಕ್ತನ ಮಾಡಿದರೆ ವೇಷಲಾಂಛನವಹುದು, ಭಕ್ತನಾಗ ನೋಡಾ. "ಗುರುಲಿಂಗಂ ಚರಲಿಂಗಂ ಭಾವಲಿಂಗಂ ಪ್ರಸಾದಕಮ್| ಚತುರ್ವಿಧಾತ್ಮಕಂ ಜ್ಞಾನಂ ಲಿಂಗಭಕ್ತಸ್ಯ ಲಕ್ಷಣಮ್||" ಇದು ಕಾರಣ ಕೂಡಲಚೆನ್ನಸಂಗಯ್ಯಾ ಮಜ್ಜನಕ್ಕೆರೆವ ಭವಿಗಳನೆಂತು ಭಕ್ತರೆಂಬೆ?