Index   ವಚನ - 44    Search  
 
ಹದಿರು ಸೂಳೆಗೆ ಕಟಕಿ ವಿದ್ಯಾವಂತಂಗೆ, ವಾದ್ಯ ವಾದನೆ ಹಾವಾಡಿಗಂಗೆ, ಶಿವಭಕ್ತರಿಗುಂಟೆ ಅಯ್ಯಾ? ಒಬ್ಬರಿಗೊಬ್ಬರು ಮಚ್ಚರಿಸಬೇಕೆಂದು ಕೊಟ್ಟನೆ ಶ್ರೀಗುರು ಲಿಂಗವನು? ಶಿವಭಕ್ತರು ಲಿಂಗಜಂಗಮವೊಂದೆಂದು ಕಾಣದಿರ್ದರೆ ಅಘೋರ ನರಕ ಕೂಡಲಚೆನ್ನಸಂಗಯ್ಯಾ.