ಪ್ರಾತಃಕಾಲದಲಗ್ರೋದಕವನು
ತಂದು ಲಿಂಗದ ಅನುವನರಿವನು,
ಪಾದೋದಕವನು ತಟ್ಟದೆ ಮುಟ್ಟದೆ ಕೊಂಬನು.
ತನ್ನವಸರವೆಂದರಿಯದೆ ಲಿಂಗದವಸರವೆಂದರಿದು,
ಮಹಾಮಜ್ಜನಾದಿಗಳಂ ಮಾಡಿಸಿ,
ಲಿಂಗ ಸನ್ನಿಧಿಯಲು ಲಿಂಗೋದಕವ ಗ್ರಹಿಸುವ ಪ್ರಸಾದಿ,
ಲಿಂಗಿಚ್ಛೆಯಾರೋಗಣೆಯಂ ಮಾಡಿಸಿ,
ಪ್ರಸಾದದರಿವನೊಮ್ಮೆ ಅರಿವನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆನು.
Art
Manuscript
Music
Courtesy:
Transliteration
Prātaḥkāladalagrōdakavanu
tandu liṅgada anuvanarivanu,
pādōdakavanu taṭṭade muṭṭade kombanu.
Tannavasaravendariyade liṅgadavasaravendaridu,
mahāmajjanādigaḷaṁ māḍisi,
liṅga sannidhiyalu liṅgōdakava grahisuva prasādi,
liṅgiccheyārōgaṇeyaṁ māḍisi,
prasādadarivanom'me arivanu.
Idu kāraṇa kūḍalacennasaṅgayyā
nim'ma prasādige namō namō embenu.