Index   ವಚನ - 121    Search  
 
ಮರಕ್ಕೆ ಬಿತ್ತು ಹುಟ್ಟಿದರೇನಯ್ಯಾ, ಬಿತ್ತಿಂಗೆ ಮರ ಹುಟ್ಟಿದರೇನಯ್ಯಾ? ಮರದ ಬೆಳಸಿನ ಫಲದ ಪರಿಯ ಬೆಸಗೊಳ್ಳಲಿಲ್ಲ. ಸಸಿ ಪಲ್ಲವಿಸಿ ತ್ರಿವಿಧವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣಂಗೆ.