Index   ವಚನ - 130    Search  
 
ಮುಖಲಿಂಗ ದರುಶನ ಜಂಗಮದಲ್ಲಿ, ಭಾವಲಿಂಗ ದರುಶನ ಮನದಲ್ಲಿ ಸ್ವಯಲಿಂಗದರುಶನ ಕಾಯದಲ್ಲಿ, ಈ ತ್ರಿವಿಧಲಿಂಗ ದರುಶನ ಜ್ಞಾನದಲ್ಲಿ. ಇದು ಕಾರಣ-ಕೂಡಲಚೆನ್ನಸಂಗನಲ್ಲಿ, ಜಂಗಮಲಿಂಗ ದರುಶನ ಬಸವಣ್ಣಂಗಲ್ಲವೆ ಉಳಿದವರಾರಿಗೆಯೂ ಅಳವಡದು.