Index   ವಚನ - 131    Search  
 
ಬಸವ ಬಲಗುಡಿತೆ, ಸಂಗಯ್ಯ ಮದುವಣಿಗ ನಾನು ಬದುವಳಿಗೆ, ವಸುಧೆಯ ಭಕ್ತರೆಲ್ಲರು ನಿಬ್ಬಣಿಗರು ಅಂಗವಿಸಿಂ ಭೋ ಅಂಗವಿಸಿಂ ಭೋ! ಶುದ್ಧಶಿವಾಚಾರವೆಂಬ ಮನೆಯಲ್ಲಿ ಮದುವೆಯಾಯಿತ್ತಾಗಿ, ಕೂಡಲಚೆನ್ನಸಂಗಯ್ಯನು ಒಬ್ಬನೆ ಅಚಳ, ನಾನು ನಿತ್ಯಮುತ್ತೈದೆ.