ಭವಿ ಮಾಡಲಿಕೆ ಪೃಥ್ವಿಯಾಯಿತ್ತು,
[ಭವಿ ಮಾಡಲಿಕೆ ಅಪ್ಪುವಾಯಿತ್ತು,
ಭವಿ ಮಾಡಲಿಕೆ ತೇಜವಾಯಿತ್ತು,
ಭವಿ ಮಾಡಲಿಕೆ ವಾಯುವಾಯಿತ್ತು],
ಭವಿ ಮಾಡಲಿಕೆ ಆಕಾಶವಾಯಿತ್ತು,
ಭವಿ ಮಾಡಲಿಕೆ ಸೂರ್ಯಚಂದ್ರಆತ್ಮರಾದರು.
[ಭವಿ ಮಾಡಲಿಕೆ] ಬ್ರಹ್ಮ ವಿಷ್ಣು ರುದ್ರ
ಮೊದಲಾದ ದೇವದಾನವ ಮಾನವರಾದರು.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಭವಿಯಿಂದಾಯಿತ್ತು, ಸಕಲ ಜಗವೆಲ್ಲ.
Art
Manuscript
Music
Courtesy:
Transliteration
Bhavi māḍalike pr̥thviyāyittu,
[bhavi māḍalike appuvāyittu,
bhavi māḍalike tējavāyittu,
bhavi māḍalike vāyuvāyittu],
bhavi māḍalike ākāśavāyittu,
bhavi māḍalike sūryacandra'ātmarādaru.
[Bhavi māḍalike] brahma viṣṇu rudra
modalāda dēvadānava mānavarādaru.
Idu kāraṇa kūḍalacennasaṅgayyanalli
bhaviyindāyittu, sakala jagavella.
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲ