"ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ"
ಎಂಬ ಶ್ರುತಿಯನರಿದು ಮತ್ತೆ ದೈವವುಂಟೆಂಬ
ವಿಪ್ರರು ನೀವು ಕೇಳಿ[ರೊ]:
"ಓಂ ನಿಧನಪತಯೇ ನಮಃ
ಓಂ ನಿಧನಪತಾಂತಿಕಾಯ ನಮಃ,
ಓಂ ಊರ್ಧ್ವಾಯ ನಮಃ
ಓಂ ಊರ್ಧ್ವಲಿಂಗಾಯ ನಮಃ
ಓಂ ಹಿರಣ್ಯಾಯ ನಮಃ
ಓಂ ಹಿರಣ್ಯಲಿಂಗಾಯ ನಮಃ
ಓಂ ಸುವರ್ಣಾಯ ನಮಃ
ಓಂ ಸುವರ್ಣಾಲಿಂಗಾಯ ನಮಃ
ಓಂ ದಿವ್ಯಾಯ ನಮಃ ಓಂ ದಿವ್ಯಲಿಂಗಾಯ ನಮಃ"
ಎಂದುದಾಗಿ,
ಏತತ್ ಸೋಮಸ್ಯ ಸೂರ್ಯಸ್ಯ
ಸರ್ವಲಿಂಗಂ ಸ್ಥಾಪಯೇತ್
ಓಂ ಪಾಣಿಮಂತ್ರಂ ಪವಿತ್ರಮ್" ಎಂದುದಾಗಿ-
ಇದನರಿದು ಮತ್ತೆ ದೈವವುಂಟೆಂಬ ದ್ವಿಜರೆಲ್ಲರೂ
ಭ್ರಮಿತರು ಕೂಡಲಚೆನ್ನಸಂಗಮದೇವಾ.