Index   ವಚನ - 156    Search  
 
ಶ್ರುತಿಸಾಕ್ಷಿಯಾದ ಸಮ್ಯಕ್‌ಗುಣಂಗಳಂ ಬೊಮ್ಮವೆಂಬ, ಬ್ರಹ್ಮವಿತ್ತುಗಳು ನೀವು ಕೇಳಿ ಭೋ! "ಓಂ ಪೃಥಿವೀ ತೇ ಪಾತ್ರಂ ದ್ಯೌರಪಿಧಾನಂ ಬ್ರಹ್ಮಣಸ್ತ್ವಾಂ ಮುಖೇ ಜುಹೋಮಿ, ಬ್ರಾಹ್ಮಣಾನಾಂ ತ್ವಾ ಪ್ರಾಣಾಪಾನಯೋರ್ಜುಹೋಮಿ, ಅಶಿತಮಸಿ ಮೈಷಾಂ ಕ್ಷೇಷ್ಠಾಃ ಅಮುತ್ರ ಸ್ಮಿನ್ ಲೋಕೇ|| ಇದಂ ವಿಷ್ಣುರ್ವಿಚಕ್ರಮೇ| ತ್ರೇಧಾ ನಿದಧೇ ಪದಂ| ಸಮೂಳ್ಹಮಸ್ಯ ಪಾಗಂಸುರೇ ಶ್ರೀ ವಿಷ್ಣೋ ಕವ್ಯಂ ರಕ್ಷಸ್ವ"|| ಎಂದುದು ವೇದ. ಆ ವೇದವನೋದಿ ಅರ್ತಿಯಲ್ಲಿ ಸುರೆಮಾಂಸವ ತಿಂಬದ್ವಿಜರ ಮೆಚ್ಚುವರೆ ಕೂಡಲಚೆನ್ನಸಂಗನ ಶರಣರು.