Index   ವಚನ - 174    Search  
 
ಅಟ್ಟುದನಡುವರೆ? ಸುಟ್ಟುದ ಸುಡುವರೆ? ಬೆಂದ ನುಲಿಯ ಸಂಧಿಸಬಹುದೆ? ಪಂಚಾಕ್ಷರಿಯಲ್ಲಿ ದಗ್ಧವಾದ ನಿರ್ದೇಹಿಗೆ ಸಂದೇಹವುಂಟೆ? "ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯಥಾ| ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಾ"|| ಇದು ಕಾರಣ, ಕೂಡಲಚೆನ್ನಸಂಗನ ಶರಣರು ಭ್ರಾಂತುಸೂತಕ ಕ್ರಿಯಾವಿರಹಿತರು.