Index   ವಚನ - 182    Search  
 
ವೀರನಾದರೆ ಅಲಗಿನ ಮೊನೆಯಲ್ಲಿ ಕಾಣಬಹುದು, ಧೀರನಾದರೆ ತನ್ನಸೋಂಕಿದಲ್ಲಿ ಅರಿಯಬಹುದು, ಭಕ್ತನಾದರೆ ತಾಗು ನಿರೋಧದಲ್ಲಿ ಅರಿಯಬಹುದು, ಕೂಡಲಚೆನ್ನಸಂಗಯ್ಯಾ ಸುಜ್ಞಾನಿಯಾದರೆ ಸುಳುಹಿನಲ್ಲಿ ಅರಿಯಬಹುದು.