ಅಂಗದ ಮೇಲೆ ಲಿಂಗ ಪ್ರತಿಷ್ಠೆಯನೆ ಮಾಡಿ
ಹಿಂಗಿದಡೆ ಪ್ರಥಮಪಾತಕ,
ಭವಿ ಪಾಕಕ್ಕೆಳಸಿದಡೆ ಎರಡನೆಯ ಪಾತಕ,
ಪ್ರತುಮಾದಿಗಳಿಗೆರಗಿದಡೆ ಮೂರನೆಯ ಪಾತಕ
ಪ್ರಸಾದಿಸ್ಥಲವನರಿಯದಿದ್ದಡೆ ನಾಲ್ಕನೆಯ ಪಾತಕ
ಸುಳುಹಡಗಿ ಲಿಂಗಲೀಯವ ಮಾಡದಿದ್ದಡೆ ಐದನೆಯ ಪಾತಕ.
ಇಂತೀ ಪಂಚಮಹಾಪಾತಕವ ಕಳೆದಲ್ಲದೆ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನಾಗಬಲ್ಲನೆ?