Index   ವಚನ - 189    Search  
 
ನೊಸಲಲೊಂದು ಕಣ್ಣು, ಮಕುಟವರ್ಧನರಾದರೇನವರು? [ಅಂಗದ ಮೇಲೆ] ಲಿಂಗ ಸಂಬಂಧವಿಲ್ಲದವರ ಮನೆಯಲು ಮಾಡಿದ ಪಾಕವ ಕೊಂಡರೆ ಶ್ವಾನಜನ್ಮ ನರಕ ತಪ್ಪದಾಗಿ ಬಲ್ಲವರೊಲ್ಲರು. ಶಿವಭಕ್ತರಲ್ಲದವರ ಮನೆಯಲುಂಡರೆ ಜನ್ಮ ಜನ್ಮಾಂತರ ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು. ಎಲೆ ಶಿವನೆ ನೀನಿಲ್ಲದವರ ಮನೆಯಲು [ತಿನಿಸಿಂಗೆ] ಎನ್ನ ಮನವು ಸೊಗಸದಯ್ಯಾ ಕೂಡಲಚೆನ್ನಸಂಗಮದೇವಾ.